ಚಿಕ್ಕಮಗಳೂರು: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರ ಹೆಲಿಕಾಪ್ಟರಿಗೆ ಪೋಲಿಸ್ ಕಾವಲು ಹಾಕಿದ ಅಧಿಕಾರಿಗಳ ಕ್ರಮ ಟೀಕೆಗೆ ಗುರಿಯಾಗಿದೆ .ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಸಕ ಸಿ .ಟಿ .ರವಿ ತಮಿಳುನಾಡಿನಿಂದ
ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು .ಐಡಿಎಸ್ ಜಿ ಕಾಲೇಜು ಬಳಿ ಹೆಲಿಕಾಪ್ಟರನ್ನು ನಿಲ್ಲಿಸಿದ್ದು 6 ಕ್ಕೂ ಅಧಿಕ ಪೊಲೀಸರು ಅದನ್ನು ಕಾಯುತ್ತಾ , ಹರಟೆ ಹೊಡೆಯುತ್ತಾ ನಿಂತಿದ್ದರು .
ಮುಖ್ಯಮಂತ್ರಿಗಳು ಸೇರಿದಂತೆ ಅತಿ ಗಣ್ಯರು ಆಗಮಿಸುವ ಹೆಲಿಕಾಪ್ಟರಿಗೆ ರಕ್ಷಣೆ ನೀಡುವುದು ಸಾಮಾನ್ಯ , ಆದರೆ ಶಾಸಕರು ಬಂದಿದ್ದ ಹೆಲಿಕಾಪ್ಟರ್ ಗೆ ಇಷ್ಟೊಂದು ರಕ್ಷಣೆ ನೀಡುವ ಅಗತ್ಯ ಇತ್ತೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಂತಹ ಅಗತ್ಯತೆ ಇದ್ದಲ್ಲಿ ಖಾಸಗಿ ಭದ್ರತೆಯನ್ನು ನಿಯೋಜಿಸಿ ಕೊಳ್ಳಬೇಕಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿವೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ