ಚಿಕ್ಕಮಗಳೂರು: ಜಿಲ್ಲಾ ಕೇಂದ್ರದ 2ಕಡೆ ಸೇರಿದಂತೆ ಜಿಲ್ಲೆಯ 9ಕಡೆಗಳಲ್ಲಿ ಇಂದು ಕೋವಿಡ್ ಲಸಿಕೆ ನೀಡಲಾಯಿತು .
ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು .
ಪೌರಕಾರ್ಮಿಕ ಗುರಮ್ಮ ಮೊದಲ ಪ್ರಶಸ್ತಿಯನ್ನು ಪಡೆದರು . ಆರಂಭದಿಂದ ೮೦೦ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು 4 ಗಂಟೆ ವೇಳೆಗೆ ಶೇಕಡಾ ೫೦ ರಷ್ಟು ಸಾಧನೆಯಾಗಿತ್ತು .
ಜಿಲ್ಲೆಯಲ್ಲಿ ಈವರೆಗೆ ೧೦೫೭೯ ಜನ ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದಾರೆ ಇದರಲ್ಲಿ ೭೫೦೦ ಸರ್ಕಾರಿ '೩೦೭೭ ಜನ ಖಾಸಗಿ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿದ್ದಾರೆ .
ಲಸಿಕೆ ಪಡೆದವರ ಮೇಲೆ ೩೦ ನಿಮಿಷಗಳ ಕಾಲ ನಿಗಾ ವಹಿಸಲಾಯಿತು .ಆರಂಭದಲ್ಲಿ ಸದ್ಯಕ್ಕೆ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ .


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ