ಚಿಕ್ಕಮಗಳೂರು :ಜಿಲ್ಲಾ ಕೇಂದ್ರದಲ್ಲಿ ಸಂಚಾರಿ ಪೊಲೀಸರು ಮಾಡಬೇಕಾದ ಕೆಲಸಗಳನ್ನೆಲ್ಲ ಬಿಟ್ಟು ಕೇವಲ ವಸೂಲಿಗೆ ಇಳಿದಂತೆ ಕಾಣುತ್ತಿದೆ .
ಇದು ಮೇಲಿನ ಅಧಿಕಾರಿಗಳ ಆದೇಶದ ಫಲ . ಕೆಲ ನಿರ್ದಿಷ್ಟ ಸ್ಥಳಗಳಲ್ಲಿ ಬಕ ಪಕ್ಷಿಗಳಂತೆ ನಿಲ್ಲುವ ಪೊಲೀಸರು , ದಾಖಲಾತಿ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಆರೋಪ ಸಾಮಾನ್ಯವಾಗಿದೆ.
ಪ್ರತಿದಿನ ಇಂತಿಷ್ಟು ಪ್ರಕರಣ ದಾಖಲಿಸಿ ಹಣ ಸಂದಾಯ ಮಾಡುವಂತೆ ಗುರಿ ನಿಗದಿಪಡಿಸಿರಿವುದೇ ಇದಕ್ಕೆಲ್ಲ ಕಾರಣ. ಸಿಕ್ಕ ಸಿಕ್ಕಲ್ಲಿ ವಾಹನ ನಿಲ್ಲಿಸಿ ಬರೆಹಾಕುವ ಪೊಲೀಸರು ಗುರಿಯನ್ನು ದಂಧೆಯಾಗಿ ಮಾಡಿಕೊಂಡಿರುವುದು ಸಾರ್ವಜನಿಕರ ಅಸಮಾಧಾನ 'ಟೀಕೆಗೂ ಗುರಿಯಾಗಿದೆ.
ಸಂಚಾರಿ ಪೊಲೀಸರು ಮುಖ ನೋಡಿ ಮಣೆ ಹಾಕುವ ಪ್ರವೃತ್ತಿಯನ್ನು ಮಾಡಿಕೊಂಡಿದ್ದಾರೆ . ಇಷ್ಟೆಲ್ಲ ನಡೆಯುತ್ತಿದ್ದರು ಮೇಲಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ