ಚಿಕ್ಕಮಗಳೂರು:. ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಆಲ್ದೂರು ಸಮೀಪದ ಗುಪ್ತಶೆಟ್ಟಿ ಜನರು ಜಿಲ್ಲಾ ಕೇಂದ್ರದಲ್ಲಿ ದಿಢೀರ್ ಮುಷ್ಕರ ಆರಂಭಿಸಿದ್ದಾರೆ .
ತಮ್ಮ ಸ್ವಗ್ರಾಮದಲ್ಲಿ 2ದಿನ ಮುಷ್ಕರ ನಡೆಸಿದ ಹಳ್ಳಿಗರು ಬೇಡಿಕೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಆಗಮಿಸಿ ಆಜಾದ್ ಮೈದಾನದಲ್ಲಿ ಮುಷ್ಕರ ಮುನ್ನಡೆಸಿದ್ದಾರೆ .
ಜಿಲ್ಲಾಧಿಕಾರಿ ಹರ್ಷಗುಪ್ತ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಧುಕರಶೆಟ್ಟಿ ಇದ್ದ ದಿನಗಳಲ್ಲಿ ಶ್ರೀಮಂತರ ಒತ್ತುವರಿಯನ್ನು ತೆರವುಗೊಳಿಸಿ ಮೃತರ ಕುಟುಂಬಗಳಿಗೆ ತಲಾ 2ಎಕರೆ ಜಮೀನನ್ನು ನೀಡಲಾಗಿತ್ತು.
ಅಂದು ಕೆಲವು ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತ ಮುಂದಾಗಿದ್ದರು ನಂತರದ ದಿನಗಳಲ್ಲಿ ಸಂಪೂರ್ಣ ಕಡೆಗಣಿಸಲಾಗಿದೆ ಎನ್ನುವುದು ಮುಖ್ಯ ಆರೋಪ .
ಕಳೆದ ಹಲವಾರು ವರ್ಷಗಳಿಂದ ಸೌಲಭ್ಯವಂಚಿತ ಈ ಜನರು ಅನೇಕ ಬಾರಿ ಪ್ರತಿಭಟನೆ ಮಾಡಿದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದಾರೆ ಎನ್ನುವ ಆರೋಪ ಮುಷ್ಕರ ನಿರತರದು .
ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ದಿಢೀರ್ ಮುಷ್ಕರ ಹೂಡಿರುವುದು ಅಧಿಕಾರಿಗಳನ್ನು ಕಸಿವಿಸಿ ಗೊಳಿಸಿದ್ದು, ಮುಷ್ಕರ ಕೈ ಬಿಡುವಂತೆ ಮಾಡಿದ ಮನವಿಗೆ ಸ್ಪಂದಿಸಿಲ್ಲ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ