ಚಿಕ್ಕಮಗಳೂರು : ಕಾಂಗ್ರೆಸ್ ಹೆಗಲ ಮೇಲೆ ಕುಳಿತು ಬಾಳಾ ಠಾಕ್ರೆ ಹೇಗೆ ಮಾತನಾಡ್ತಾರೆ ಎಂದು ಪ್ರಶ್ನಿಸಿರುವ ಮಾಜಿ ಸಚಿವ ಸಿ ಟಿ ರವಿ
ನೈತಿಕತೆ ಇದ್ದರೆ ಅವರಿಗೆ ಅನ್ಯಾಯ ಮಾಡಿದ ಹೆಗಲಿನಿಂದ ಕೆಳಗಿಳಯಲಿ ಎಂದು ಸವಾಲು ಹಾಕಿದ್ದಾರೆ
ಮಹಾರಾಷ್ಟ್ರ ಸಿ.ಎಂ. ಉದ್ಧವ್ ಠಾಕ್ರೆ ಗಡಿ ವಿವಾದ ಕುರಿತು ತೆಗೆದಿರುವ ಖ್ಯಾತೆಗೆ ಪ್ರತಿಕ್ರಿಯಿಸಿರುವ ಅವರು
ಗಡಿ ವಿಚಾರವನ್ನು ರಾಜಕೀಯ ಬೆಳೆ ಬೆಯಿಸಿಕೊಳ್ಳುವುದು ಬಹಳ ಹಿಂದಿನಿಂದ ಬಂದಿದೆ ಎಂದು ವಿಷಾದಿಸಿದರು
ಕನ್ನಡ ಮಾತನಾಡುವವರು ಮಹಾರಾಷ್ಟ್ರ ಗಡಿಯೊಳಗೆ ಇದ್ದಾರೆ.ಮಠಾಠಿ ಮಾತನಾಡುವವರು ಕರ್ನಾಟಕ ದಲ್ಲಿದ್ದಾರೆ.ಇದಕ್ಕೆ ಸಂಬಂಧಿಸಿದ್ದಂತೆ ಹಲವು ಅಯೋಗಗಳು ಬಂದಿದೆ ಎಂದು ಹೇಳಿದರು
ಭಾಷಾವಾರು ಪ್ರಾಂತ್ಯವಾಗುವಾಗ ಕ್ಷೇತ್ರ ವಿಂಗಡಣೆಯಾಗಿದೆ..ಅವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸ ಭಾರತೀಯರು ಮಾಡಿಕೊಂಡು ಬಂದಿದ್ದಾರೆ.ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸ ನಡೆದಿಲ್ಲ ಎಂದರು.
ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದ್ರೆ ಬಿಜೆಪಿ ಅಸ್ಥಿತ್ವದಲ್ಲಿರಲಿಲ್ಲ.
ಅಂದು ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಧವ್ ಠಾಕ್ರೆ ಯಾರ ಬೆಂಬಲಿತದಿಂದ ಅಧಿಕಾರ ನಡೆಸುತ್ತಿದ್ದಾರೂ ಅವರ ವಿರುದ್ದ ಪ್ರಶ್ನೆ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ